ಭಾನುವಾರ, ಆಗಸ್ಟ್ 17, 2014

ಚಾರ್ಮಾಡಿ ಘಾಟಿ

ಚಾರ್ಮಾಡಿ ಘಾಟಿಯು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಕೊಂಡಿಯಾಗಿದ್ದು ಕೊಟ್ಟಿಗೆಹಾರದಿಂದ ಚಾರ್ಮಾಡಿ ಹಳ್ಳಿಯವರೆಗೆ ಚಾಚಿಕೊಂಡಿದೆ. ಕಡಿದಾದ ಈ ಘಾಟಿ ದಾರಿಯಲ್ಲಿ ಮಳೆಗಾಲದಲ್ಲಿ ಸಂಚರಿಸುವುದಂದರೆ ಏನೋ ಆಹ್ಲಾದದ ಅನುಭೂತಿಯ ಅನುಭವ. ಅಧ್ಬುತ ನಿಸರ್ಗ ಸೊಂದರ್ಯದ ಮಧ್ಯೆ ಮೈರೋಮಾಂಚನಗೊಳಿಸುವ ಮಂಜುತುಂಬಿದ ದಟ್ಟದಿವಿಯ ಘಾಟಿ ದಾರಿಯಲ್ಲಿ, ಒಂದೇ ಸಮನೆ ಸುರಿಯುವ ಮಳೆ ಮತ್ತು ಹಿಮಚಳಿಗೆ ಮೈಒಡ್ಡಿ  ಸಂಚರಿಸುವುದಂದರೆ ಏನೋ ಸಂಭ್ರಮ. ಘಾಟಿ ರಸ್ತೆಗೆ ತಾಗಿಕೊಂಡಿರುವ ಅಲೇಖಾನ್ ಜಲಪಾತ.
ನಿಸರ್ಗ ಪ್ರೇಮಿಗಳಿಗೆ ಇಲ್ಲಿನ ಜಲಧಾರೆಗಲಾದ  ಜೇನುಕಲ್ಲು ಜಲಪಾತ, ಕಲ್ಲರ್ಬಿ ಜಲಪಾತ, ಕಲ್ಲುಗುಂಡಿ ಜಲಪಾತ, ನಾಗರಗುಂಡಿ ಜಲಪಾತ, ಜಲನರ್ತನವ ನೋಡುವ ತವಕ. ಇಲ್ಲಿ  ಕೊಡೆಕಲ್ಲು, ಬಾಳೆಕಲ್ಲು, ಜೇನುಕಲ್ಲು, ಏರಿಕಲ್ಲು, ದೊಡ್ಡೇರಿ ಬೆಟ್ಟ ಅಮೇಧಿಕಲ್ಲು ಬೆಟ್ಟ,ಎತ್ತಿನ ಭುಜ, ಬಾರೆಮಲೆ, ದೀಪದಕಲ್ಲು, ಶಿಂಗಾನಿ ಬೆಟ್ಟ ಮುಂತಾದುವು.

1 ಕಾಮೆಂಟ್‌: