ಹೊನ್ನಾವರದ ಸುಂದರ ರಮಣೀಯ ಸ್ಥಳಗಳಲ್ಲಿ ಪಶ್ಚಿಮ ಘಟ್ಟದ ಮಡಿಲಲ್ಲಿರುವ ಕರಿಕಾನ ಅಮ್ಮನವರ
ಬೆಟ್ಟವೂ ಒಂದು. ಜಾಸ್ತಿ ಪ್ರಚಾರವಿಲ್ಲದೆ ಕರಿ ಕಾನನದ ಸ್ವಚ್ಹ ಒಡಲಲ್ಲಿರುವ ಈ
ದೇಗುಲವು ಆಸ್ತಿಕ ಮತ್ತು ನಾಸ್ತಿಕ ಎರಡೂ ವರ್ಗದವರು ಭೇಟಿ ಕೊಡಬೇಕಾದಂತ ಜಾಗವಿದು.
ಹೊನ್ನಾವರದಿಂದ ಅರೆಅಂಗಡಿ ಮುಖಾಂತರ 8 ಕಿಲೋ ಮೀಟರ್ ಚಲಿಸಿದರೆ ಅಲ್ಲಿ ದೇವಸ್ತಾನದ
ಕಮಾನು
ನಿಮ್ಮನ್ನು ಸ್ವಾಗತಿಸುತ್ತದೆ. ಮುಂದೆ ಬೆಟ್ಟದ ಕಡಿದಾದ ಹಾದಿಯಲ್ಲಿ ಕಗ್ಗಾಡಿನ ನಡುವೆ 4
ಕಿಲೋ ಮೀಟರ್ ಸಂಚಾರಿಸುತ್ತ ದೇಗುಲವ ಕ್ರಮಿಸುದೇ ಒಂದು ಸುಂದರ ಅನುಭೂತಿ.
ಸಾಧು
ಶ್ರೀಧರ ಸ್ವಾಮಿಯವರು ಈ ಸುಂದರ ಪರಿಸರದಲ್ಲಿ ದೈವಿಕತೆಯ ನೆಲೆಯನ್ನು ಗುರುತಿಸಿ ೧೮ನೇ
ದಶಕದಲ್ಲಿ ಕರಿಕಾನ ಬೆಟ್ಟದ ತುದಿಯ ಸಮೀಪ ದೇವಿಯ ದೇವಸ್ತಾನವನ್ನು ನಿರ್ಮಿಸಿದರು
ಎನ್ನಲಾಗಿದೆ. ಮೊದಲಿನಿಂದಲೂ ಈ ಸಾನಿಧ್ಯದಲ್ಲಿ ಸ್ವಚ್ಛತೆಗೆ ಮೊದಲ ಪ್ರಾಶಸ್ತ್ಯ
ಕೊಡುತ್ತ
ಬಂದಿದ್ದು ಸ್ವಲ್ಪ ಏನಾದರು ಹೆಚ್ಚುಕಡಿಮೆಯಾದಲ್ಲಿ ಹುಲಿಯು ದೇವಸ್ತಾನಕ್ಕೆ ಬರುತ್ತವೆ
ಎಂಬ ಪ್ರತೀತಿ ಇದೆ. ಈಗಲೂ ಆಸ್ತಿಕ ಭಾಂದವರು ಮತ್ತು ಬೆಟ್ಟದ ತಪ್ಪದ ಗ್ರಾಮದಲ್ಲಿರುವ
ಗ್ರಾಮಸ್ತರು ಭೇಟಿ ನೀಡುವುದರೊಂದಿಗೆ ಆ ತಾಯಿಯ ಆಶೀರ್ವಾದ ಪಡೆಯುವುದರೊಂದಿಗೆ ಆ ಸುಂದರ
ಪರಿಸರದಲ್ಲಿ ಸಂತಸವ ಮನಕಾಣುತ್ತಿದ್ದಾರೆ . ಇಲ್ಲಿಂದ ಕೆಲವು ಮೈಲುಗಲ ಅಂತರದಲಿ ಒಂದಡಿಕೆ
ಎಂಬ ಶಿವನ ಕ್ಷೇತ್ರವಿದ್ದು ಇಲ್ಲಿ ಸೋಜಿಗವೆಂಬಂತೆ ಒಂದು ಅಡಿಕೆ ಮರವಿದ್ದು
ಅದರಲಿ ಒಂದೇ ಅಡಿಕೆ ಕಾಯಿ ಆಗುತ್ತದೆ ಎನ್ನಲಾಗುತ್ತದೆ.
ಅರ್ಚಕ ಕುಟುಂಬವೊಂದು
ದೇವಿಯ ಪೂಜಾ ಕೈಖರ್ಯವನ್ನು ಕ್ರಮಬದ್ಧವಾಗಿ ನೋಡಿಕೊಳ್ಳುತ್ತಿದ್ದು ಕೆಲವು ವಿಶೇಷ
ದಿನಗಳಲ್ಲಿ ಸಮಸ್ತ ಭಕ್ತ ಭಾಂದವರ ಸಮ್ಮುಖದಲ್ಲಿ ಭಾರಿ ವಿಜ್ರಂಬನೆಯಿಂದ ವಿವಿಧ
ಧರ್ಮಿಕಾಚರಣೆಗಳು ನಡೆಯುತ್ತಾ ಬಂದಿರುತ್ತದೆ. ದೇಗುಲದ ಸಾನಿಧ್ಯದಲ್ಲಿ ತಂಗಲು
ತಕ್ಕಮಟ್ಟಿನ ವ್ಯವಸ್ತೆಯಿದ್ದು, ಮೊದಲೇ ಹೇಳಿದಲ್ಲಿ ಅರ್ಚಕರು ಫಲಾಹಾರದ ವ್ಯವಸ್ತೆ
ಮಾಡುತ್ತಾರೆ.
ಮುಂಗಾರಿನ ಮುಂಜಾನೆಯ ಮಂಜಿನಲಿ ಚಿಲಿ-ಪಿಲಿ ಹಕ್ಕಿಯ ನಿನಾನದ
ನಡುವೆ ವಾಹನದ ಪ್ರಯಾಣದ ಬದಲು ನಡಿಗೆಯ ನಡಿಗೆಯ ಮೂಲಕ ಬೆಟ್ಟಕೆ ಚಾರಣ ಮಾಡುವುದೇ ಒಂದು
ಚೆಂದ. ದೂರದ ಅರಬ್ಬೀ ಸುಮದ್ರದಲ್ಲಿನ ಸೂರ್ಯಾಸ್ತದ ಸಡಗರವ ಸವಿಯುತ್ತ ಸಂಜೆಯ ತಂಗಾಳಿಯನು
ಅನುಭವಿಸುವುತ್ತ ಆ ದಿವ್ಯ ಸಾನಿಧ್ಯದಲ್ಲಿ ಕೂತರೆ ಎಂತವರನ್ನೂ
ಮಂತ್ರಮುಗ್ಧನಾಗಿರಿಸುವುದರಲ್ಲಿ ಅನುಮಾನವಿಲ್ಲ.ಮೋಡಗಳ ಸುಂದರ ಕಣ್ಣುಮುಚ್ಚಾಲೆ ಆಟವ
ನೋಡಲು ಮಳೆಗಾಲದಲ್ಲಿ ಭೇಟಿ
ನೀಡುವುದು ಒಳಿತು.
ನಿಮ್ಮ ಕರಿಕಾನ ಬೆಟ್ಟದ ಭೇಟಿಯ ಜೊತೆಗೆ ರಾಮತೀರ್ಥ, ಅಪ್ಸರಕೊಂಡ, ಧಾರೇಶ್ವರ ಮುಂತಾದ ಸುತ್ತಮುತ್ತಲಿನ ರಮಣೀಯ ಜಾಗಕ್ಕೂ ಭೇಟಿ ಕೊಡಬಹುದು.
(ರಾ.ಹೊ.)
Nice post.. Good beginning...
ಪ್ರತ್ಯುತ್ತರಅಳಿಸಿ???
ಪ್ರತ್ಯುತ್ತರಅಳಿಸಿ